ಯೋಗ ಸಾಧನೆಗೆ ಪೂರಕ ಅದಿತಿ ಮುದ್ರೆ
ಉಂಗುರ ಬೆರಳು ಪೃಥ್ವಿ ತತ್ವವನ್ನೊಳಗೊಂಡಿದೆ. ಹೆಬ್ಬೆಟ್ಟು ಆಗ್ನಿ. ಇದನ್ನು ಪೃಥ್ವಿ ತತ್ವದ ಬುಡಕ್ಕೆ ತಾಗಿಸುವುದರಿಂದ ಪೃಥ್ವಿ ತತ್ವ ಹೆಚ್ಚಾಗಿ ಆಗ್ನಿಯ ಉಷ್ಣತೆಯೂ ಹೆಚ್ಚಾಗುತ್ತದೆ. ಉಂಗುರ ಬೆರಳಿನ ಬುಡಕ್ಕೆ ಸೂರ್ಯ ಮಂಡಲವಿದೆ. ಆದ್ದರಿಂದ ಉಷ್ಣತೆ ಮತ್ತು ಶಕ್ತಿ ಬೆಳೆಯುತ್ತದೆ. ಶರೀರದ ತೂಕವನ್ನೂ ಅದಿತಿ ಮುದ್ರೆಯಿಂದ ಹೆಚ್ಚಿಸಬಹುದು. ಮಾಡುವ ವಿಧಾನ: ಹೆಬ್ಬೆಟ್ಟಿನ ತುದಿಯನ್ನು ಉಂಗುರ ಬೆರಳಿನ ಬುಡಕ್ಕೆ ತಾಗಿಸಿದಾಗ ಆದಿತಿ ಮುದ್ರೆ ಆಗುತ್ತದೆ. ಇತರ ಬೆರಳುಗಳನ್ನು ನೆಟ್ಟಗೆ ಇಡಬೇಕು. ಹೆಬ್ಬೆಟ್ಟಿನ ತುದಿಮಾತ್ರ ಉಂಗುರ ಬೆರಳಿನ ಬುಡಕ್ಕೆ ಓರೆಯಾಗಿ ತಾಗಿಸಬೇಕು. ಉಪಯೋಗ: ಬೆಳಗ್ಗೆ ಎದ್ದಾಕ್ಷಣ ಒಂದೇ ಸಮನೆ ಸೀನು ಬರುವ ಸಮಸ್ಯೆ ನಿಲ್ಲುತ್ತದೆ. ಫುಡ್ ಪಾಯಿಸನ್ ಆದಾಗ ಈ ಮುದ್ರೆ ವಿಷದ ಪರಿಣಾಮ ತಡೆಗಟ್ಟುತ್ತದೆ. ಜಪತಪ ಸಾಧನೆ ಮಾಡುವಾಗ ಸೀನು, ಆಕಳಿಕೆ ಬರುವುದನ್ನು ತಡೆಯುತ್ತದೆ. ಯೋಗ ಸಾಧನೆಯ ಮೊದಲೇ ಈ ಮುದ್ರೆ ಮಾಡಿದರೆ ಮಾರ್ಗ ಸುಗಮ.